ಆಡಿಸ್ ಅಬಾಬಾ
ಇಥಿಯೋಪಿಯದ ರಾಜಧಾನಿ. ಈ ಹೆಸರಿಗೆ ಹೊಸ ಹೂ ಎಂಬ ಅರ್ಥ ಇದೆ. ಮಧ್ಯ ಇಥಿಯೋಪಿಯದ ಎನ್‍ಲೊಟೊ ಪರ್ವತಶ್ರೇಣಿಯ ಇಳಿಜಾರಿನಲ್ಲಿದೆ (ಉ.ಅ.901', ಪೂ.ರೇ.38056'). ಸ್ಥಾಪನೆ 1887 ರಲ್ಲಿ, ಚಕ್ರವರ್ತಿ ಎರಡನೆಯ ಮೆನಲಿಕ್‍ನಿಂದ. 2 ವರ್ಷಗಳ ಅನಂತರ ರಾಜಧಾನಿಯಾಯಿತು. ಚಕ್ರವರ್ತಿ ನೆಡಸಿದ 2,000 ನೀಲಗಿರಿ ವೃಕ್ಷಗಳು ಇಂದಿಗೂ ಇವೆ. ಜನಸಂಖ್ಯೆ 4,43,728 (1961). ಬಹುಜನರ ಭಾಷೆ ಇಂಗ್ಲಿಷ್. ಇಟಲಿ ಸೈನ್ಯ 1936 ರಲ್ಲಿ ಈ ಪಟ್ಟಣವನ್ನು ವಶಪಡಿಸಿಕೊಂಡಿತು. 1941ರಲ್ಲಿ ಬ್ರಿಟಿಷ್ ಮತ್ತು ಇಥಿಯೋಪಿಯ ಪಡೆಗಳು ವಾಪಸ್ಸು ಪಡೆದುವು. ಇಲ್ಲಿಂದ ಜಿಬೂತಿಗೆ ರೈಲು ಸಂಪರ್ಕವಿದೆ. 12 ಮೈ. ದೂರದ ಅತೇಕಿ ಸರೋವರದಿಂದ ವಿದ್ಯುತ್‍ಶಕ್ತಿ ಸರಬರಾಜಾಗುತ್ತದೆ. ಕಾಫಿ, ತಂಬಾಕು, ಚರ್ಮ, ಮುಂತಾದುವು ರಫ್ತಾಗುತ್ತವೆ. ಅನೇಕ ಲಘು ಉದ್ದಿಮೆಗಳೂ, ಕೈಗಾರಿಕೆಗಳೂ ಇವೆ.				   
(ಎಸ್.ಸಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ